ಮಾದ ಮತ್ತು ಮಾನಸಿ ಚಿತ್ರೀಕರಣ ಮುಕ್ತಾಯ
Posted date: 31 Thu, Mar 2016 – 09:46:25 AM

ರಾಜೇಶ್ & ದೇವಿ ಫಿಲಂಸ್ ಲಾಂಛನದಲ್ಲಿ ಮನೋಮೂರ್ತಿ ಸಂಗೀತ ನೀಡಿ ನಿರ್ಮಾಣ ಮಾಡುತ್ತಿರುವ ಮಾದ ಮತ್ತು ಮಾನಸಿ ಚಿತ್ರಕ್ಕೆ ಮಿನರ್ವ ಮಿಲ್ಸ್‌ನಲ್ಲಿ ಹಾಕಿರುವ ಸೆಟ್ ಒಂದರಲ್ಲಿ ನಾಯಕಿ ಸಹನರ್ತಕಿಯರೊಂದಿಗೆ ನಚಲೇ, ನಚಲೇ, ನಾಚಿಕೆ ಬಿಟ್ಟು ನಚಲೇ, ಹುಡುಗರ ಹಾರ್ಟಿಗೆ ಹುಳಾನ ಬಿಟ್ಟು ಮೈ ಕೈ ಕುಣಿಸಿ ನಚಲೇ... ಎಂದು  ಹಾಡಿ ಕುಣಿದ ದೃಶ್ಯ ಕಲೈ ನೃತ್ಯನಿರ್ದೇಶನದಲ್ಲಿ  ನಡೆದ ದೃಶ್ಯದೊಂದಿಗೆ ಚಿತ್ರೀಕರಣ ಪೂರ್ಣಗೊಂಡಿತು. ಸತೀಶ್ ಪ್ರಧಾನ್ ನಿರ್ದೇಶನದ, ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು - ನರಸಿಂಹಮೂರ್ತಿ (ನರ್ಸಿ), ಛಾಯಾಗ್ರಹಣ-ಕೆ.ಎಸ್. ಚಂದ್ರಶೇಖರ್, ಸಹಕಾರ ನಿರ್ದೇಶನ - ಹೆಚ್.ಕೆ. ಮೌಲಾಕ್ಷ, ನೃತ್ಯ - ಇಮ್ರಾನ್, ಕಲೈ, ಪ್ರಭು ಶ್ರೀನಿವಾಸ್, ಸಾಹಸ- ಡಿಫರೆಂಟ್ ಡ್ಯಾನಿ, ಸಂಕಲನ - ಕೆ.ಎಂ.ಪ್ರಕಾಶ್, ನಿರ್ವಹಣೆ - ಮೈಸೂರು ಸುರೇಶ್, ತಾರಾಗಣದಲ್ಲಿ ಪ್ರಜ್ವಲ್ ದೇವರಾಜ್, ಶೃತಿ ಹರಿಹರನ್, ರಂಗಾಯಣ ರಘು, ಬುಲೆಟ್ ಪ್ರಕಾಶ್, ಶೋಭರಾಜ್, ಪವನ್, ವಾಣಿಶ್ರೀ, ಶೃತಿ ನಾಯಕ್, ನಿರಂಜನ್ ಯತಿರಾಜ್, ಮುಂತಾದವರಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed